ಫೋಲೆಂಗೊ, ಟ್ಯಾವೊಫೀಲೊ
	1496-1544. ಇಟಲಿಯ ವಿಡಂಬನ ಕವಿ. ಇಟಾಲಿಯನ್ ಮತ್ತು ಲ್ಯಾಟಿನ್ ಭಾಷೆಗಳೆರಡನ್ನೂ ಬೆರೆಸಿ ಮಾಕರೋನಿಕ್ ಎಂಬ ಕಲಸುಮೇಲೊಗರ ಶೈಲಿಯಲ್ಲಿ ಹಲವು ವಿಡಂಬನ ಕವನಗಳನ್ನೂ ಅಣಕವಾಡುಗಳನ್ನೂ ಬರೆದ. ಇವನ ಕೃತಿಗಳಲ್ಲಿ ಬಾಲ್ಡಸ್ ಎಂಬ ಹಾಸ್ಯ ಕಥನಕವನ ಮುಖ್ಯವಾದುದು. ಮೋಸ್ಚೇಯ (ನೋಟಗಳು ಮತ್ತು ಇರುವೆಗಳ ಕದನ) ಮುಂತಾದ ಇತರ ಕೃತಿಗಳಲ್ಲಿ ಅಂದಿನ ರೊಮ್ಯಾಂಟಿಕ್ ಭವ್ಯಕಾವ್ಯಗಳನ್ನು ಗೇಲಿಮಾಡಿದ್ದಾನೆ. ಬಾಲ್ಡಸ್ ಕಾವ್ಯದಲ್ಲಿ ಬರುವ ವಿನೋದ ಪ್ರಸಂಗಗಳು ಒರಟು ಹುಚ್ಚು ಹಾಸ್ಯವೂ ಪಾತ್ರಗಳೂ ಫ್ರೆಂಚ್ ವಿಡಂಬನಕಾರರಾದ ರ್ಯಾಬೆಲಾ ಮುಂತಾದವರ ಮೇಲೆ ಪ್ರಭಾವ ಬೀರಿದುವು.
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ